Friday, 24 July 2015
Thursday, 16 July 2015
ಈ ವಾರದ ಚರ್ಚೆ:
ಗ್ರೀಸ್ ಆರ್ಥಿಕ ಬಿಕ್ಕಟ್ಟಿಗೆ ಕಾರಣಗಳೇನು? ನಾವು ಕಲಿಯಬೇಕಾದುದ್ದೇನು?
ವಿಷಯದ ಕುರಿತು ಸಿ.ಪಿ.ಎಂ ನ ರಾಜ್ಯ ಮುಖಂಡರಾದ
ಜಿ.ಎನ್ ನಾಗರಾಜುರವರು ಮಾತನಾಡಲಿದ್ದಾರೆ.
ಮುಕ್ತ ಸಂವಾದ ನಡೆಯಲಿದೆ.
ಜುಲೈ 16ರ ಗುರುವಾರ ಸಂಜೆ 5:30ಕ್ಕೆ,
ಪುಸ್ತಕಮನೆ, 1ನೇ ಕ್ರಾಸ್ ಅಶೋಕನಗರ, ಮಂಡ್ಯ.
ನೀವು ಬನ್ನಿ .. ಸ್ನೆಹಿತರಿಗೂ ತಿಳಿಸಿ.
7353770205.
ಜನಶಕ್ತಿ ವಾರದ ಚರ್ಚೆ ಬಳಗ
Draft - demands. All of you Please respond and put in your corrections. Please note: There are 3 different types of demands.. Immediate, short term and Long term.
ಹಕ್ಕೊತ್ತಾಯಗಳ ಕರಡು: ನಿಮ್ಮೆಲ್ಲರ ಅಭಿಪ್ರಾಯ ಹಾಗೂ ತಿದ್ದುಪಡಿಗಾಗಿ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಬರೆಯಿರಿ.
ತಕ್ಷಣದ ಹಕ್ಕೊತ್ತಾಯಗಳು
- ಸಕ್ಕರೆ ಕಾರ್ಖಾನೆಗಳು ಈ ಸಾರಿಯ ಕ್ರಷಿಂಗ್ಅನ್ನು ಈ ಕೂಡಲೇ ಆರಂಭಿಸಬೇಕು. ಅವಧಿ ಮೀರಿದ ಕಬ್ಬನ್ನು ಆದ್ಯತೆಯ ಮೇರೆಗೆ ಕ್ರಷಿಂಗ್ ಮಾಡಬೇಕು. ಕಬ್ಬಿನ ಬಾಕಿ ಏನೂ ಇಲ್ಲದಂತೆ ಕಾಯ್ದೆಯನುಸಾರ ಹಣ ನೀಡಬೇಕು. ಈಗ ನಿಗದಿ ಮಾಡಿರುವ ಎಫ್.ಆರ್.ಪಿ ಅವೈಜ್ಞಾನಿಕವಾಗಿದ್ದು, ಟನ್ನಿಗೆ 3500 ರೂ. ನಿಗದಿಯಾಗಬೇಕು. ಈ ಎಲ್ಲಾ ಅಂಶಗಳಿಗೆ ಸರ್ಕಾರ ನೇರ ಹೊಣೆಯಾಗಿದ್ದು, ಸಕ್ಕರೆ ಕಾರ್ಖಾನೆ ಮುಟ್ಟುಗೋಲು, ಸರ್ಕಾರದಿಂದಲೇ ನೇರ ನಗದು ಪಾವತಿ ಒಳಗೊಂಡಂತೆ ಯಾವುದೇ ಬಗೆಯ ಕ್ರಮ ಅಗತ್ಯವಿದ್ದರೂ ಅವನ್ನು ತೆಗೆದುಕೊಳ್ಳಬೇಕು. ಈಗ ಎಲ್ಲಾ ಕಬ್ಬನ್ನು ಕ್ರಷ್ ಮಾಡಬೇಕೆಂದರೆ, ಆಲೆಮನೆಗಳಿಗೂ ಸಹಾಯಧನ ನೀಡಬೇಕು. ಅವಧಿ ಮೀರಿದ ಕಬ್ಬಿನಿಂದ ಆಗುತ್ತಿರುವ ನಷ್ಟಕ್ಕೆ ಪ್ರತಿ ಎಕರೆಗೆ 50 ಸಾವಿರ ರೂ ಪರಿಹಾರ ನೀಡಬೇಕು.
- ಸಕ್ಕರೆ ಉದ್ದಿಮೆ ಮುಂದಿಟ್ಟಿರುವ “40 ಲಕ್ಷ ಟನ್ ಗಳನ್ನು 'ಬಫರ್ ಸ್ಟಾಕ್' ಆಗಿ ಕೊಂಡು ಇಟ್ಟುಕೊಳ್ಳಬೇಕು” ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿ ಸದ್ಯದ ಬಿಕ್ಕಟ್ಟನ್ನು ಕಡಿಮೆ ಮಾಡಿಕೊಳ್ಳಬೇಕು. ರಂಗರಾಜನ್ ಸಮಿತಿಯ ಯಾವುದೇ ಶಿಫಾರಸ್ಸುಗಳನ್ನು ಜಾರಿಗೊಳಿಸಬಾರದು.
- ಈಗಲೂ ಸಾಲದ ನೋಟೀಸ್ ಗಳು ರೈತರ ಮನೆ ಬಾಗಿಲಿಗೆ ತಲುಪುತ್ತಿವೆ. ಅವು ನಿಲ್ಲಬೇಕು. ರೈತರ ಎಲ್ಲಾ ಸಾಲ ಮನ್ನಾ ಆಗಬೇಕು. ಮನ್ನಾ ತೀರ್ಮಾನ ತಡವಾಗುವುದಾದಲ್ಲಿ ಹೊಸ ಸಾಲ ಕೊಡಲು ಹಳೆಯ ಬಾಕಿ ಅಡ್ಡಿ ಅಲ್ಲ ಎಂಬ ನಿರ್ಧಾರ ಪ್ರಕಟಿಸಬೇಕು. ಸಹಕಾರ ಸಂಘಗಳ ಮೇಲೆ ಈ ಹೊರೆ ಹಾಕುವುದಕ್ಕಿಂತ, ಸರ್ಕಾರವೇ ಹೊಣೆ ಮತ್ತು ಹೊರೆ ಹೊತ್ತುಕೊಳ್ಳಬೇಕು. ಕಬ್ಬು ಒಪ್ಪಿಗೆ ಪತ್ರದ ಆಧಾರದ ಮೇಲೆ ಮಾತ್ರ ಸಾಲ ನೀಡುವುದು ತಪ್ಪಬೇಕು. ಎಲ್ಲಾ ಬೆಳೆಗಳಿಗೂ ಸಾಲ ಸೌಲಭ್ಯ ನೀಡಬೇಕು. ಜಮೀನಿನ ಕಾಗದ ಪತ್ರಗಳಲ್ಲಿ ಸಮಸ್ಯೆ ಇದ್ದರೆ, ಅವನ್ನು ಒಂದು ವಾರದ ಒಳಗೆ ಬಗೆಹರಿಸಿ ಸಾಲ ನೀಡಲು ಬೇಕಾದ ಏಕಗವಾಕ್ಷಿ ಕೇಂದ್ರವನ್ನು ತೆರೆಯಬೇಕು.
- ಖಾಸಗಿ ಲೇವಾದೇವಿಗಾರರ ಮೇಲೆ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತಷ್ಟು ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳಬೇಕು. ಆದರೆ ಸರ್ಕಾರದ ಸಾಂಸ್ಥಿಕ ಸಾಲಗಳು ಕಡಿಮೆಯಾದಾಗ, ಖಾಸಗಿ ಸಾಲಗಳು ಹೆಚ್ಚಾಗುತ್ತವೆ ಎಂಬ ಮೂಲ ಕಾರಣ ಬಗೆಹರಿಸದೇ ಹೋದಲ್ಲಿ, ಜನರು ಮತ್ತಷ್ಟು ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ.
- ಕಬ್ಬು ಒಣಗದಿರಲು ಕೆ.ಆರ್.ಎಸ್.ನಿಂದ ನೀರು ಹರಿಸಿ, ಟೇಲೆಂಡ್ ಭಾಗದವರೆಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು.
- ಹಾಲಿನ ದರ ಇಳಿಸಿರುವುದನ್ನು ಹಿಂತೆಗೆದುಕೊಳ್ಳಬೇಕು. ಹಾಲಿನ ದರ ಏರಿದಾಗಲೆಲ್ಲಾ ಫೀಡ್ಸ್ ದರ ಏರಿಸುವುದನ್ನು ಮಾಡಬಾರದು. ಪ್ರತಿ ಲೀಟರ್ ಹಾಲಿಗೆ 26 ರೂ. ನೀಡಬೇಕು.
- ಈ ಸದ್ಯ ದೇಶದ ರೈತರ ಮೇಲೆ ಪರಿಣಾಮ ಬೀರುವ ಆಹಾರ ಧಾನ್ಯಗಳ ಆಮದನ್ನು ನಿಲ್ಲಿಸಬೇಕು; ರೇಷ್ಮೆ ಆಮದು ನಿಲ್ಲಿಸಬೇಕು.
- ನರೇಗಾ ಯೋಜನೆಯಡಿ ಲಭ್ಯವಿರುವ ಎಲ್ಲಾ ಕಾಮಗಾರಿಗಳನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಂಡು ಉದ್ಯೋಗ ಸೃಷ್ಟಿ ಮಾಡಬೇಕು. ವೇತನ ಪಾವತಿ ತಕ್ಷಣದಲ್ಲಿ ಆಗುವಂತೆ ನೋಡಿಕೊಳ್ಳಬೇಕು.
- ಈ ತಿಂಗಳಿಂದಲೇ ಮದ್ಯದ ಟಾರ್ಗೆಟ್ ಕಡಿಮೆ ಮಾಡುತ್ತಾ ಹೋಗಬೇಕು. ಸರ್ಕಾರವೇ ವ್ಯವಸ್ಥಿತವಾಗಿ ಹೆಚ್ಚಿಸುತ್ತಾ ಬಂದಿರುವ ಮದ್ಯದ ಮಾರಾಟವನ್ನು 2004ರ ಮಟ್ಟಕ್ಕೆ ಇಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.
- ರೈತರಿಗೆ ಆತ್ಮಸ್ಥೈರ್ಯ ತುಂಬಲು ಸರ್ಕಾರ ಕೆಲವು ದೊಡ್ಡ ಹಾಗೂ ಮಹತ್ವದ ಕ್ರಮಗಳನ್ನು ಮುಂದಿಡಬೇಕು.
ಅಲ್ಪಕಾಲೀನ ಹಕ್ಕೊತ್ತಾಯಗಳು
- ಗುಣಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆಗಳನ್ನು ಸಂಪೂರ್ಣ ಸರ್ಕಾರೀ ವೆಚ್ಚದಲ್ಲಿ ಖಾತರಿಗೊಳಿಸಬೇಕು. ಖಾಸಗಿ ವಲಯದ ದರೋಡೆಯನ್ನು ನಿಯಂತ್ರಿಸಬೇಕು.
- ಒಳಸುರಿ (ಗೊಬ್ಬರ, ಬೀಜ ಇತ್ಯಾದಿ) ಸಬ್ಸಿಡಿ, ಬೆಂಬಲ ಬೆಲೆ ಖಾತ್ರಿ ಮತ್ತು ಬೆಳೆ ನಷ್ಟ ಪರಿಹಾರ ಹಾಗೂ ಉದ್ಯೋಗ ನೀಡಿಕೆ, ಈ ನಾಲ್ಕು ಕ್ರಮಗಳ ಮೂಲಕ ಕೃಷಿ ಮತ್ತು ಕೃಷಿ ಕೂಲಿಕಾರರ ಪ್ರತಿ ಕುಟುಂಬಕ್ಕೆ ಕನಿಷ್ಠ 20,000 ರೂ. ಆದಾಯ ಖಾತ್ರಿ ನೀಡಬೇಕು.
- ಕೆಎಂಎಫ್ ಮಾದರಿ ವ್ಯವಸಾಯೋತ್ಪನ್ನಗಳ ಮಾರಾಟಕ್ಕೆ ಸಹಕಾರಿ ಒಕ್ಕೂಟ ಸ್ಥಾಪನೆಗೆ ಮುಂದಾಗಬೇಕು. ಸರ್ಕಾರ ಸಂಪೂರ್ಣ ಬೆಂಬಲಕ್ಕೆ ನಿಲ್ಲಬೇಕು.
- ವರದಕ್ಷಿಣೆ ನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ವಿವಿಧ ಸ್ವರೂಪದ ಕ್ರಮಗಳು ಮತ್ತು ಹಂತ ಹಂತವಾಗಿ ಪಾನನಿಷೇಧದ ಕಡೆ ಸಾಗಲು ಬೇಕಾದ ಕ್ರಮಗಳು.
- ಜಮೀನಿನ ಮೌಲ್ಯ ಆಧರಿಸಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡ್ಡಾಯ ಮಾಡಬೇಕು.
- ಎಲ್ಲಾ ಬೆಳೆಗಳ ಬೆಲೆ ನಿಗದಿಗೆ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಜನಸಾಮಾನ್ಯರಿಗೆ ಎಲ್ಲಾ ಬಗೆಯ ಆಹಾರ ಧಾನ್ಯಗಳನ್ನು ಸಬ್ಸಿಡಿ ಮೂಲಕ ತಲುಪುವಂತೆ ಮಾಡುವುದು. ಎಲ್ಲಾ ಬೆಳೆಗಳಿಗೂ ಬೆಲೆ ನಿಗದಿ ಮಾಡಲು ಕೃಷಿ ಬೆಲೆ ಆಯೋಗಕ್ಕೆ ಅಧಿಕಾರ.
- ರೈತರಿಗೆ ಎಲ್ಲೆಲ್ಲಿ ಯಾವ ಯಾವ ಬೆಳೆ ಎಷ್ಟೆಷ್ಟು ಬಿತ್ತನೆಯಾಗಲಿದೆ, ಆಗಿದೆ ಎಂಬುದನ್ನು ಕೇಂದ್ರೀಕೃತ ಡಾಟಾ ಬೇಸ್ ಮೂಲಕ ತಲುಪಿಸಬೇಕು
- ಸರ್ಕಾರೀ ಮತ್ತು ಸಹಕಾರೀ ವಲಯದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು ಇರಬೇಕು. ಸರ್ಕಾರದ ನಿರ್ದೇಶನ ಪಾಲಿಸದ ಖಾಸಗಿ ಕಾರ್ಖಾನೆಗಳನ್ನು ವಶಕ್ಕೆ ತೆಗೆದುಕೊಳ್ಳುವುದರ ಮೂಲಕ ಮುಂದಿನ 3-4 ವರ್ಷಗಳಲ್ಲಿ ಶೇ.50ರಷ್ಟು ಸಕ್ಕರೆ ಕಾರ್ಖಾನೆಗಳು ಈ ವಲಯಕ್ಕೆ ಬರುವಂತೆ ನೋಡಿಕೊಳ್ಳಬೇಕು.
- ಸಾಲ ನೀಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ವಶೀಲಿ, ಅಧಿಕಾರಸ್ಥರ ಸಾಮೀಪ್ಯ ಇಲ್ಲದೆಯೂ ಸಾಲ ಸಿಗುವಂತೆ ಆಗಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
- ಶಿಂಷಾದ ಹೆಚ್ಚಿನ ಏತ ನೀರಾವರಿಗಳು ಕೆಲಸ ಮಾಡುತ್ತಿಲ್ಲ. ಕೆಲವು ಆರಂಭವೇ ಆಗಲಿಲ್ಲ. ಇನ್ನು 6 ತಿಂಗಳ ಒಳಗೆ ಇವೆಲ್ಲವೂ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು.
ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದ ಹಕ್ಕೊತ್ತಾಯಗಳು
- ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಬೆಲೆ ನಿಗದಿಯಲ್ಲಿ ರೈತರದ್ದು ನಿರ್ಧಾರಕ ಪಾತ್ರ ಇರುವಂತೆ ನೋಡಿಕೊಳ್ಳಬೇಕು.
- ಇಡೀ ದೇಶದಲ್ಲಿ ಏನು ಬೆಳೆಯಬೇಕು, ಏನು ಬೆಳೆಯಬಾರದು ಎಂಬುದನ್ನು ರೈತರ ಪರಿಸ್ಥಿತಿ, ದೇಶದ ಜನರ ಅಗತ್ಯ ಹಾಗೂ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸುವುದು ಮತ್ತು ಅದಕ್ಕೆ ತಕ್ಕಂತೆ ರೈತ ಸಮುದಾಯಕ್ಕೆ ಮಾಹಿತಿ, ಅರಿವು ಹಾಗೂ ಪ್ರೋತ್ಸಾಹದಾಯಕ ಕ್ರಮಗಳನ್ನು ನೀಡುವುದು.
- ನಮ್ಮ ದೇಶದ ಕೃಷಿ ಕ್ಷೇತ್ರವನ್ನು ಅಪಾಯಕ್ಕೆ ದೂಡಿರುವ ಡಬ್ಲ್ಯುಟಿಓದಿಂದ ಹೊರಬರಬೇಕು. ಲಕ್ಷಾಂತರ ರೈತರ ಆತ್ಮಹತ್ಯೆಗೆ ಕಾರಣವಾಗಿರುವುದಕ್ಕಿಂತ ದೊಡ್ಡ ಕಾರಣ ಬೇಕಿಲ್ಲ.
- ಅಧಿಕ ಇಳುವರಿ ತರುವ, ಹೆಚ್ಚು ಪೌಷ್ಟಿಕತೆ ಇರುವ ವಿವಿಧ ರೀತಿಯ ತಳಿಗಳ ಸಂಶೋಧನೆ ನಡೆಯಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದ ದೂರ ಸರಿದು ವೈಜ್ಞಾನಿಕ, ಪರಿಸರ ಸ್ನೇಹಿ, ಸುಸ್ಥಿರ ಕೃಷಿಯತ್ತ ಸಾಗಬೇಕು. ಇದು ರೈತ ಜನಾಂದೋಲನದಿಂದ ಮೂಡಿಬರುವ ಅರಿವು ಮತ್ತು ಸರ್ಕಾರದ ಹೊಣೆಗಾರಿಕೆ ಇವೆರಡರ ಜಂಟಿ ಪ್ರಯತ್ನದಿಂದ ಮಾತ್ರ ಸಾಧ್ಯ.
- ಕೃಷಿ ಮತ್ತು ಕೃಷಿ ಪೂರಕವಾದ ಇತರ ಕಸುಬುಗಳು (ಹೈನುಗಾರಿಕೆ, ಕುರಿ-ಆಡು-ಕೋಳಿ-ಹಂದಿ ಸಾಕಾಣಿಕೆ, ಮೀನುಗಾರಿಕೆ ಇತ್ಯಾದಿ) ಒಂದರೊಡನೊಂದು ಜೊತೆಗೂಡಿ ನಡೆಯಲು ಬೇಕಾದ ಪ್ರೋತ್ಸಾಹದಾಯಕ ಕ್ರಮಗಳು ಮತ್ತು ರೂಪಿಸುವುದು
- ಮಾರುಕಟ್ಟೆ ಮೇಲೆ ಯಾರಿಗೆ ನಿಯಂತ್ರಣ ಎನ್ನುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಮಿಕ್ಕೆಲ್ಲಾ ಕ್ರಮಗಳನ್ನು ನಿರ್ಧರಿಸುವ ಅಂಶ ಇದಾಗಿದೆ. ಒಳಸುರಿ ಹಾಗೂ ಬೆಳೆದ ಪದಾರ್ಥ ಎರಡರಲ್ಲೂ ದೊಡ್ಡ ಬಂಡವಾಳಿಗರ ಪಾತ್ರ ಇಲ್ಲದಂತೆ ಮಾಡಬೇಕು. ರೈತ ಸಹಕಾರಿಗಳೇ ಮಾರುಕಟ್ಟೆಯ ನೇತೃತ್ವ ವಹಿಸಬೇಕು.
- ನೀರಾವರಿ: ದೇಶದಲ್ಲಿ ಲಭ್ಯವಿರುವ ಒಟ್ಟೂ ನೀರಿನ ಸಂಪನ್ಮೂಲದ ಸಮರ್ಪಕ ಹಾಗೂ ವೈಜ್ಞಾನಿಕ ಬಳಕೆಯಿಂದ ದೇಶಕ್ಕೆ ಅಗತ್ಯವಿರುವ ಎಲ್ಲಾ ಬೆಳೆಗಳಿಗೆ ನೀರನ್ನು ಕೊಡಲು ಸಾಧ್ಯ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗುತ್ತಿದೆ; ಇನ್ನೂ ಹೆಚ್ಚಾಗಲಿದೆ. ಇದರಿಂದ ಆಗಿರುವ ಮತ್ತು ಮುಂದೆ ಆಗಲಿರುವ ಸಮಸ್ಯೆಗಳನ್ನು ಮುಂಗಂಡು, ಮೇಲೆ ಹೇಳಲಾದ ಎಲ್ಲಾ ಪರಿಹಾರೋಪಾಯಗಳ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
Tuesday, 14 July 2015
ಮಂಡ್ಯ ಜಿಲ್ಲೆಯ 750 ಗ್ರಾಮಗಳಲ್ಲಿ ರೈತ ಸಂಘರ್ಷ ಜಾಥಾವನ್ನು ಕರ್ನಾಟಕ ಜನಶಕ್ತಿ ಹಮ್ಮಿಕೊಳ್ಳಲಾಗಿದೆ.
ರೈತರು ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು ರೈತ ಆತ್ಮಹತ್ಯೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಜುಲೈ 21 ರಿಂದ ಆಗಷ್ಟು 2ರ ವರೆಗೆ ಸಂಘಟನೆವತಿಯಿಂದ ರೈತ ಸಂಘರ್ಷ ಜಾಥಾ ಜರುಗಲಿದೆ. ಆಗಷ್ಟ್ 3ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ರೈತ ಜಾಥಾದೊಂದಿಗೆ ದಿಗ್ಭಂಧನ ಏರ್ಪಡಿಸಲಾಗಿದೆ.
ಜುಲೈ 15ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಮದ್ದೂರು ಪ್ರವಾಸಿಮಂದಿರದಲ್ಲಿ ರೈತರ, ರೈತಪ್ರತಿನಿಧಿಗಳು, ಪ್ರಗತಿಪರ ಸಂಘಟನೆಗಳ ಪದಾದಿಕಾರಿಗಳ ನೇತೃತ್ವದಲ್ಲಿ ಸದರಿ ರೈತ ಸಂಘರ್ಷ ಜಾಥಾ ಕುರಿತು ಪೂರ್ವಾಭಾವಿ ಸಭೆಯನ್ನು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಂತೋಷ್ ಕುಮಾರ್ ಫೋ: 7899947678
'ಅನ್ನದ ಋಣ ಅಭಿಯಾನ'
ಸ್ವಯಂ ಪ್ರೇರಿತ ಕಾರ್ಯಕರ್ತರ ನೊಂದಾವಣೆ
ಈ ನಾಡಿನ ರೈತ ಬಾಂಧವರ ಋಣ ನಮ್ಮ ಮೇಲಿದೆ. ಅವರುಗಳು ಸಂಕಷ್ಟದಲ್ಲಿದ್ದಾಗ, ಜೊತೆಗೂಡುವುದು ನಮ್ಮ ಕರ್ತವ್ಯ ಅಲ್ಲವೇ? ಹೌದು ಎನ್ನುವುದಾದಲ್ಲಿ ನೀವು ಯಾವ ರೀತಿ ಜೊತೆಗೂಡಬಹುದೆಂಬುದು ಯೋಚಿಸಿ. ಅದಕ್ಕಾಗಿ 2 ನಿಮಿಷ ಸಮಯ ಕೊಟ್ಟು ಈ ಪತ್ರವನ್ನು ಓದಿ, ನಿಮ್ಮ ವಿವರ ಕೊಡಿ.
ಕರ್ನಾಟಕ ಜನಶಕ್ತಿಯು ಇತರ ಸಂಘಟನೆಗಳು ಹಾಗೂ ಸಮಾನ ಮನಸ್ಕರೊಡಗೂಡಿ ಜಿಲ್ಲೆಯ 750 ಹಳ್ಳಿಗಳಲ್ಲಿ 'ರೈತ ಸಂಘರ್ಷ ಜಾಥಾ'ವನ್ನು ಕೈಗೊಂಡಿದೆ. ರಾಜ್ಯದೆಲ್ಲೆಡೆ ಮತ್ತೊಂದು ಸರಣಿ ರೈತ ಆತ್ಮಹತ್ಯೆಗಳು ನಡೆಯುತ್ತಿವೆ. ಅದರಲ್ಲೂ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ವಿದ್ಯಮಾನವನ್ನು"ತುರ್ತುಸ್ಥಿತಿ" ಎಂಬಂತೆ ಪರಿಗಣಿಸಿ ತೀವ್ರ ರೂಪದ ಕ್ರಮಗಳಿಗೆ ಮುಂದಾಗಬೇಕಾದ ರಾಜ್ಯ ಸರ್ಕಾರ ಕಾಟಾಚಾರದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಆಗಸ್ಟ್ 3ರಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಚಳವಳಿ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಈ ನಾಡಿನ ಹಲವು ಗಣ್ಯ ವ್ಯಕ್ತಿಗಳು, ಪ್ರಜ್ನಾವಂತರು, ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯ 750 ಹಳ್ಳಿಗಳಲ್ಲಿ ಜಾಥಾ ನಡೆಯಲಿದೆ. ಜುಲೈ 20ರಂದು ಕಾರ್ಯಕರ್ತರಿಗೆ ಅಧ್ಯಯನ/ತರಬೇತಿ ಶಿಬಿರವಿರುತ್ತದೆ. ಜುಲೈ 21 ರಿಂದ ಆಗಸ್ಟ್ 2ರ ವರೆಗೆ ಹಳ್ಳಿ ಜಾಥಾ ಇರುತ್ತದೆ. ಈ ಆಂದೋಲನದೊಂದಿಗೆ ಕೈಜೋಡಿಸಲು ಕರ್ನಾಟಕ ಜನಶಕ್ತಿಯು ಮನವಿ ಮಾಡುತ್ತದೆ.
ಇದು ಒಂದು ಸಂಘಟನೆಯ ಕಾರ್ಯಕ್ರಮವಲ್ಲ. ಯಾವುದೇ ರಾಜಕೀಯ ಪಕ್ಷದ, ನಿರ್ದಿಷ್ಟ ಜಾತಿಗೆ, ವರ್ಗಕ್ಕೆ ಸೀಮಿತವಾದ ಚಳುವಳಿ ಅಲ್ಲ. ಕೃಷಿಕರ ಆತ್ಮಹತ್ಯೆಗಳನ್ನು ತಡೆಗಟ್ಟಲು, ಸ್ಥೈರ್ಯವನ್ನು ಹೆಚ್ಚಿಸಲು ಸರ್ಕಾರದ ನೀತಿಗೆಟ್ಟ ಕಾನೂನುಗಳನ್ನು ಸರಿಪಡಿಸಲು ನಾಡಿನ ಎಲ್ಲಾ ನಾಗರೀಕರು ಈ ಅಭಿಯಾನದಲ್ಲಿ ಜೊತೆಗೂಡಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತದೆ.
ಈ ಅಭಿಯಾನಕ್ಕೆ 200 ಜನ ಕಾರ್ಯಕರ್ತರ 15 ದಿನಗಳ ಸಮಯ ಬೇಕಿದೆ (ಸುಮಾರು 3,000 ಮಾನವ ಗಂಟೆಗಳು). ನಿಮ್ಮ ಸಮಯ, ಕೌಶಲ್ಯ ಅಥವಾ ಇನ್ನಿತರ ರೀತಿಯ ಸಂಪನ್ಮೂಲಗಳನ್ನು ಇದಕ್ಕೆ ಕೊಡಬಹುದು. ನಿಮಗೆ ಎಷ್ಟು ಸಾಧ್ಯವೋ ಅಷ್ಟು. ಯಾವ ರೀತಿಯಲ್ಲಿ ತೊಡಗಿಕೊಳ್ಳಬಹುದು ಇಲ್ಲಿ ತಿಳಿಸಿ.
- ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ
- ಪ್ರತಿನಿತ್ಯ ಕೆಲವು ಘಂಟೆಗಳ ಕಾಲ
- ಶನಿವಾರ/ಭಾನುವಾರ ಮಾತ್ರ
- . ದಿನದ ಸಾಯಂಕಾಲ ಮಾತ್ರ
- ನಾನು ಹಳ್ಳಿ ಜಾಥಾಕ್ಕೆ ಬರುತ್ತೇನೆ.
- ನಾನು ಇದ್ದ ಕಡೆಯಿಂದಲೇ ಸ್ವಲ್ಪ ಸಮಯ ಕೊಟ್ಟು ಕೆಲಸ ಮಾಡುತ್ತೇನೆ.
- ನಾನು ಮಂಡ್ಯ ಅಥವಾ ಇನ್ನಿತರ ತಾಲೂಕು ಕೇಂದ್ರಗಳಿಂದ ಕೆಲಸ ಮಾಡುತ್ತೇನೆ.
- ನಾನು ಈ ನಿರ್ದಿಷ್ಟ ದಿನಗಳಂದು ಬಂದು ಪಾಲ್ಗೊಳ್ಳಬಲ್ಲೆ (ಯಾವ್ಯಾವ ದಿನಾಂಕಗಳು ಎಂದು ನಮೂದಿಸಿ)
ಹೆಸರು : ಮೊಬೈಲ್ : 1. 2.
ವಯಸ್ಸು: ಇಮೇಲ್:
ವಿಳಾಸ :
ವಯಸ್ಸು: ಇಮೇಲ್:
ವಿಳಾಸ :
ಜಿಲ್ಲೆ : ತಾಲೂಕು: ಹಳ್ಳಿ
ವಿದ್ಯಾಭ್ಯಾಸ : ಉದ್ಯೋಗ:
ವಿದ್ಯಾಭ್ಯಾಸ : ಉದ್ಯೋಗ:
ನಾನು ಕೆಳಗಿನ ಕೆಲಸಗಳನ್ನು ಮಾಡಬಲ್ಲೆ
1. ಹಳ್ಳಿಯಲ್ಲಿ ರೈತರೊಂದಿಗೆ ಮಾತನಾಡುವುದು
2. ಬೀದಿ ನಾಟಕ
3. ಫೋನ್ ಕರೆಗಳು
4. ಗ್ರಾಫಿಕ್ ಡಿಸೈನ್
5. ವಂತಿಗೆ ನೀಡಬಹುದು
6. ಲೇಖನ, ಇತ್ಯಾದಿ ಬರೆಯಬಲ್ಲೆ.
7 ದಾನಿಗಳ ಸಂಪರ್ಕ
8 ಸಭೆ ಸಮಾರಂಭ ನಿರ್ವಹಣೆ
9 ಕಾಲೇಜುಗಳಲ್ಲಿ ಪ್ರಚಾರ
10. ಹಾಡು
11 ಕಚೇರಿ ಕಾಗದಪತ್ರ ನಿರ್ವಹಣೆ
12 ಜಾಥಾಕ್ಕೆ ನನ್ನ ವಾಹನವನ್ನು ನೀಡಬಲ್ಲೆ
13 ಚಿತ್ರೀಕರಣ
14.ಅಧ್ಯಯನ/ ಸಂಶೋಧನೆ
15 ಪತ್ರ/ಈಮೇಲ್ ಉತ್ತರಿಸುವುದು
16. ಫೇಸ್ ಬುಕ್ ವಾಟ್ಸ್ಅಪ್ ಬ್ಲಾಗ್ ನಿರ್ವಹಣೆ
17. ಗೋಡೆ ಬರಹ
18. ಅಂತರ್ಜಾಲ ಎಸ್ಎಂಎಸ್
19. ಕಾರ್ಟೂನ್/ಚಿತ್ರ ಬರೆಯಬಲ್ಲೆ
20. ಕೌನ್ಸೆಲಿಂಗ್
1. ಹಳ್ಳಿಯಲ್ಲಿ ರೈತರೊಂದಿಗೆ ಮಾತನಾಡುವುದು
2. ಬೀದಿ ನಾಟಕ
3. ಫೋನ್ ಕರೆಗಳು
4. ಗ್ರಾಫಿಕ್ ಡಿಸೈನ್
5. ವಂತಿಗೆ ನೀಡಬಹುದು
6. ಲೇಖನ, ಇತ್ಯಾದಿ ಬರೆಯಬಲ್ಲೆ.
7 ದಾನಿಗಳ ಸಂಪರ್ಕ
8 ಸಭೆ ಸಮಾರಂಭ ನಿರ್ವಹಣೆ
9 ಕಾಲೇಜುಗಳಲ್ಲಿ ಪ್ರಚಾರ
10. ಹಾಡು
11 ಕಚೇರಿ ಕಾಗದಪತ್ರ ನಿರ್ವಹಣೆ
12 ಜಾಥಾಕ್ಕೆ ನನ್ನ ವಾಹನವನ್ನು ನೀಡಬಲ್ಲೆ
13 ಚಿತ್ರೀಕರಣ
14.ಅಧ್ಯಯನ/ ಸಂಶೋಧನೆ
15 ಪತ್ರ/ಈಮೇಲ್ ಉತ್ತರಿಸುವುದು
16. ಫೇಸ್ ಬುಕ್ ವಾಟ್ಸ್ಅಪ್ ಬ್ಲಾಗ್ ನಿರ್ವಹಣೆ
17. ಗೋಡೆ ಬರಹ
18. ಅಂತರ್ಜಾಲ ಎಸ್ಎಂಎಸ್
19. ಕಾರ್ಟೂನ್/ಚಿತ್ರ ಬರೆಯಬಲ್ಲೆ
20. ಕೌನ್ಸೆಲಿಂಗ್
Monday, 13 July 2015
ಅನ್ನದ-ಋಣ-ಅಭಿಯಾನ-ಸೇರಿರಿ
ಇಂದು ನಡೆದ ಪತ್ರಿಕಾಗೋಷ್ಠಿಯ ಪತ್ರಿಕಾ ಹೇಳಿಕೆ
ಕೃಷಿ ಬಿಕ್ಕಟ್ಟಿಗೆ ಅಸಲೀ ಕಾರಣ ಗುರುತಿಸಿ, ಅಸಲೀ ಪರಿಹಾರ ಕೇಳಬೇಕಿದೆ
ಆತ್ಮಹತ್ಯೆಗಳನ್ನು 'ತುರ್ತುಸ್ಥಿತಿ' ಎಂಬಂತೆ ಪರಿಗಣಿಸಿ ತೀವ್ರ ರೂಪದ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ
ಜುಲೈ 21ರಿಂದ ಮಂಡ್ಯ ಜಿಲ್ಲೆಯ 750 ಹಳ್ಳಿಗಳಲ್ಲಿ 'ರೈತ ಸಂಘರ್ಷ ಜಾಥಾ': 150 ಕಾರ್ಯಕರ್ತರು ಭಾಗಿ
ಜುಲೈ 21ರಿಂದ ಮಂಡ್ಯ ಜಿಲ್ಲೆಯ 750 ಹಳ್ಳಿಗಳಲ್ಲಿ 'ರೈತ ಸಂಘರ್ಷ ಜಾಥಾ': 150 ಕಾರ್ಯಕರ್ತರು ಭಾಗಿ
ಆಂದೋಲನದ ಜೊತೆ ಕೈ ಜೋಡಿಸಲು ಕೋರಿ 'ಅನ್ನದ ಋಣ' ಅಭಿಯಾನ
ನಾಡಿನ ಸಾಹಿತಿ - ಕಲಾವಿದರು, ಜನಪರ ಸಂಘಟನೆಗಳ ಪ್ರತಿನಿಧಿಗಳು,
ವಿವಿಧ ವೃತ್ತಿನಿರತರು ಭಾಗವಹಿಸಲು ಮನವಿ
ಆಗಸ್ಟ್ 3ರಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ
ರಾಜ್ಯದಲ್ಲಿ ಪ್ರತಿನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಾಗಿದೆ. ಈ ವರ್ಷ ಇದು ಕಬ್ಬು ಬೆಳೆಗಾರರನ್ನು ಬಾಧಿಸುತ್ತಿದೆ. ಸರ್ಕಾರಗಳು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನೋಡಿದರೆ, ಇದೂ ಮತ್ತೊಂದು ಸರಣಿ ಆತ್ಯಹತ್ಯೆ ಎಂಬಂತೆ ಭಾವಿಸಿದಂತಿದೆ. ರಾಜ್ಯ ಸರ್ಕಾರದ ಕೆಲವು ಮಂತ್ರಿಗಳು ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ತೆಪ್ಪಗಿದೆ. ಈ ಸರ್ಕಾರಗಳ ನೀತಿಗಳೇ ಸದ್ಯದ ಬಿಕ್ಕಟ್ಟಿಗೆ ಕಾರಣ ಎಂಬುದನ್ನು ಮರೆಮಾಚಿ, ಈ ವರ್ಷದ 'ಅತೀ ಕಬ್ಬು ಉತ್ಪಾದನೆ'ಯೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. 1995ರಲ್ಲಿ ಡಬ್ಲ್ಯುಟಿಓ ಒಪ್ಪಂದಕ್ಕೆ ಸಹಿ ಹಾಕಿದ ನಂತರವೇ 'ಸಾಮೂಹಿಕ ಆತ್ಯಹತ್ಯೆ' ಎಂಬ ವಿದ್ಯಮಾನ ಆರಂಭವಾಯಿತು ಎಂಬುದನ್ನು ಯಾರೂ ಮಾತಾಡುತ್ತಿಲ್ಲ.
ಅದೇನೇ ಇರಲಿ, ಈ ಸದ್ಯ 'ನೈಸರ್ಗಿಕ ವಿಕೋಪ' ಬಂದಾಗ ಯಾವ ರೀತಿ ಪ್ರತಿಕ್ರಿಯಿಸಬೇಕೋ ಆ ರೀತಿಯಲ್ಲಿ ಕಾರ್ಯಪ್ರವೃತ್ತರಾಗುವ ಅಗತ್ಯವಿತ್ತು. ಅದನ್ನೂ ಮಾಡುತ್ತಿಲ್ಲ. ಕಾಟಾಚಾರದ ಮಾತುಗಳು ಮತ್ತು ಕಾಟಾಚಾರದ ಕ್ರಮಗಳು ಮಾತ್ರ ನಡೆಯುತ್ತಿವೆ. ಈ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಲಜ್ಜೆಗೆಟ್ಟ ನಡವಳಿಕೆ ತೋರುತ್ತಿದ್ದರೆ, ವಿರೋಧ ಪಕ್ಷಗಳು ಬೆಂದ ಮನೆಯಲ್ಲಿ ಗಳ ಹಿರಿಯುವುದನ್ನು ಬಿಟ್ಟು ಪರಿಣಾಮಕಾರಿ ಕ್ರಮಗಳಿಗೇನೂ ಆಗ್ರಹಿಸುತ್ತಿಲ್ಲ. ಏಕೆಂದರೆ, ಅವರುಗಳು ಅಧಿಕಾರದಲ್ಲಿದ್ದಾಗಲೂ ಮಾಡಿದ್ದು ಅದೇ ಆಗಿದೆ.
ಹಾಗಾದರೆ ಸಮಾಜದ ಇನ್ನಿತರ ವಿಭಾಗಗಳಿಗೆ ಇದರಲ್ಲಿ ಯಾವ ಜವಾಬ್ದಾರಿಯೂ ಇಲ್ಲವೇ? ಅನ್ನದ ಋಣ ಇದ್ದೇ ಇದೆ. ಕೃಷಿ ಬಿಕ್ಕಟ್ಟಿನ ಹೊರೆಯನ್ನು ಸಂಪೂರ್ಣ ಹೊತ್ತುಕೊಂಡಿರುವ ರೈತರ ಆರ್ಥಿಕ ಸಂಕಷ್ಟಗಳನ್ನು ಬಗೆಹರಿಸಲು ಸಾಧ್ಯವಿರದಿದ್ದರೂ, ಅಸಲೀ ಕಾರಣಗಳನ್ನು ಪತ್ತೆ ಹಚ್ಚಲು ಜೊತೆಯಾಗಬೇಕಿದೆ; ಅದಕ್ಕೆ ಪರಿಹಾರ ಹುಡುಕಲು ಕೈ ಜೋಡಿಸಬೇಕಿದೆ; ಪರಿಹಾರವನ್ನು ಆಗ್ರಹಿಸಲು ಹೆಗಲಿಗೆ ಹೆಗಲು ಕೊಟ್ಟು ಹೋರಾಟಕ್ಕೆ ನಿಲ್ಲಬೇಕಿದೆ.
ಅದಕ್ಕಾಗಿ ಕರ್ನಾಟಕ ಜನಶಕ್ತಿಯು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಂಡ್ಯ ಜಿಲ್ಲೆಯ 750 ಹಳ್ಳಿಗಳಲ್ಲಿ 'ರೈತ ಸಂಘರ್ಷ ಜಾಥಾ'ವನ್ನು ಹಮ್ಮಿಕೊಳ್ಳಲಿದ್ದೇವೆ. 150 ಜನ ಕಾರ್ಯಕರ್ತರು 15 ತಂಡಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲೂ ಆಗಸ್ಟ್ 2ರವರೆಗೆ ಜಾಥಾ ನಡೆಸಿ, ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಜುಲೈ 21ರ ರೈತ ಹುತಾತ್ಮ ದಿನದಂದು ಈ ಜಾಥಾ ಆರಂಭವಾಗಲಿದೆ. 'ಕೃಷಿ ಬಿಕ್ಕಟ್ಟಿಗೆ ರೈತರು ಕಾರಣರಲ್ಲ: ಸಕರ್ಾರಗಳು ಕಾರಣ. ಆತ್ಯಹತ್ಯೆಯಲ್ಲ ಆತ್ಮಸ್ಥೈರ್ಯದ ಹೋರಾಟ ನಮ್ಮ ಹಾದಿ, ಬನ್ನಿ ಜೊತೆಗೂಡಿ' ಎಂಬ ಘೋಷಣೆಯೊಂದಿಗೆ ಈ ಹಳ್ಳಿಗಳನ್ನು ಕಾರ್ಯಕರ್ತರು ತಲುಪಲಿದ್ದಾರೆ.
ನಾಡಿನ ಎಲ್ಲಾ ಪ್ರಜ್ಞಾವಂತರು, ಸಾಹಿತಿ-ಕಲಾವಿದರು, ಸಂಘಟನೆಗಳ ಪ್ರತಿನಿಧಿಗಳು, ವೈದ್ಯರು, ವಕೀಲರು, ಶಿಕ್ಷಕರು ಹಾಗೂ ಇನ್ನಿತರ ವೃತ್ತಿನಿರತರು ಈ ಜಾಥಾದಲ್ಲಿ ಪಾಲ್ಗೊಳ್ಳಲು ನಾವು ಮನವಿ ಮಾಡುತ್ತೇವೆ. ಅಂತಿಮವಾಗಿ ಆಗಸ್ಟ್ 3ರಂದು ಜಿಲ್ಲಾಧಿಕಾರಿ ಕಚೇರಿ ದಿಗ್ಬಂಧನ ಕಾರ್ಯಕ್ರಮ ಇರುತ್ತದೆ.
ಇದು ಒಂದು ಸಂಘಟನೆಯ ಕಾರ್ಯಕ್ರಮವಲ್ಲ. ಯಾವುದೇ ರಾಜಕೀಯ ಪಕ್ಷದ, ನಿರ್ದಿಷ್ಟ ಜಾತಿಗೆ ಸೀಮಿತವಾದ ಚಳವಳಿಯಲ್ಲ. ಮಾಧ್ಯಮದವರೂ ಸೇರಿದಂತೆ ನಾಡಿನ ಎಲ್ಲಾ ಮಾನವೀಯ ಜನರು ಜೊತೆಗೂಡಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.
Subscribe to:
Posts (Atom)

