ಸ್ನೇಹಿತರೆ,
"ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ" ಸಂಘಟನೆಯು " ಸಮಾನ ಶಿಕ್ಷಣ : ವರ್ತಮಾನದ ಸವಾಲು,ಭವಿಷ್ಯದ ಆಶಯ" ಎನ್ನುವ ಪುಸ್ತಕವನ್ನು ಪ್ರಕಟಿಸಿದೆ. ಭಾರತ ಎಲ್ಲಾ ಜಾತಿ,ವರ್ಗ,ಮತಗಳಿಗೆ ಸೇರಿದ ಮಕ್ಕಳು ಒಂದೇ ಶಾಲೆಯಲ್ಲಿ ಕಲಿಯುವಂತಾಗಬೇಕೆನ್ನುವ ಸಮಾನ ಶಾಲಾ ವ್ಯವಸ್ಥೆ ಮತ್ತು ಆ ಮೂಲಕ ಎಲ್ಲರಿಗೂ ಸಮಾನ ಶಿಕ್ಷಣ ಹಾಗೂ ಶಿಕ್ಷಣದ ರಾಷ್ಟ್ರೀಕರಣಗೊಳಿಸಬೇಕೆನ್ನುವ ಆದರ್ಶಗಳನ್ನು ವಿವರವಾಗಿ ಚರ್ಚಿಸಲು,ಜನತೆಯೊಂದಿಗೆ ಸಂವಾದ ನಡೆಸಲು ಈ ಪುಸ್ತಕ ಮಾಲಿಕೆಯನ್ನು ಪ್ರಾರಂಬಿಸಲಾಗಿದೆ. ಆರಂಭದ ಈ ಪುಸ್ತಕವು ಖ್ಯಾತ ಶಿಕ್ಷಣ ತಜ್ನ,ಮಾನವ ಹಕ್ಕುಗಳ ಹೋರಾಟಗಾರ ಅನಿಲ್ ಸದ್ಗೋಪಾಲ್,ಕನ್ನಡದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆಯ ಆಶಯಗಳಿಗಾಗಿ ಕ್ರಿಯಾಶೀಲರಾಗಿ ಚಿಂತಿಸುತ್ತಿರುವ ಡಾ.ವಿ.ಪಿ.ನಿರಂಜನಾರಾಧ್ಯ,ರೂಪಾ ಹಾಸನ ಅವರ ಲೇಖನಗಳನ್ನು ಒಳಗೊಂಡಿದೆ.ತಾವೆಲ್ಲರೂ ಈ ಪುಸ್ತಕವನ್ನು ಕೊಂಡು,ಓದಿ ತಮ್ಮ ಅಭಿಪ್ರಾಯ,ಸಲಹೆಗಳನ್ನು ಕೊಡುವುದರ ಮೂಲಕ ಈ ಸಂವಾದದಲ್ಲಿ ಪಾಲ್ಗೊಳ್ಳಬೇಕೆಂದು "ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ" ಸಂಘಟನೆಯ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಈ ಸಲಹೆ ಮತ್ತು ಚಿಂತನೆಗಳನ್ನು ಮುಂದೆ ಬರಲಿರುವ ಪರಿಷ್ಕೃತಗೊಂಡ ಪುಸ್ತಕದಲ್ಲಿ ಸೇರಿಸಿಕೊಳ್ಳಲಾಗುತ್ತದೆ.ಈ ಮೂಲಕ ಈ ಸಮಾನ ಶಿಕ್ಷಣಕ್ಕಾಗಿ ಸಂಘಟನೆಯಲ್ಲಿ ನೀವೂ ಪಾಲ್ಗೊಳ್ಳಿ.
ಪುಸ್ತಕಗಳಿಗಾಗಿ ಸಂಪರ್ಕಿಸಿ : : 9880453799,7353770202, 8892939771,9945516267

No comments:
Post a Comment